ಭಾನುವಾರ, ಸೆಪ್ಟೆಂಬರ್ 21, 2014

ಭಾವನೆಗಳನ್ನೆಲ್ಲ ಗಾಳಿಯಲ್ಲಿ ತೇಲಿಬಿಟ್ಟು......

-ವೀರಣ್ಣ ಮಂಠಾಳಕರ್

ನಿನ್ನ ಬಗ್ಗೆ ನನ್ನೊಳಗೆ ಬೇಸರವಿಲ್ಲ. ನಿರಾಸೆಯಂತೂ ಇಲ್ಲವೇ ಇಲ್ಲ. ಪ್ರೀತಿಸದಿದ್ದರೇನಂತೆ...? ಪ್ರೀತಿಗಿಂತ ನಿನ್ನೊಳಗೆ ಅಭಿಮಾನ ಇರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ. ಅಚ್ಚರಿಯ ಮಾತೊಂದು ನಿನಗೆ ಹೇಳಲೇಬೇಕು. ನನ್ನೀ ಸ್ಥಾನದಲ್ಲಿ ಬೇರೆ ಯಾರೇ ಆಗಿದ್ದರೂ ನಿನ್ನನ್ನು ಪ್ರಪೋಸ್ ಮಾಡಿಯೇ ಮಾಡುತಿದ್ದರು.  ಆದರೆ ನಾನು ಪೂರ್ವಾಪರ ಯೋಚನೆಯನ್ನು ಮಾಡದೇ ಹಾಗೆಲ್ಲ ಮಾಡುವಂತಿರಲಿಲ್ಲ. 

ಹಾಗಂತಲೇ ನಿನಗೆ ಮೊದಲು ಪ್ರಪೋಸ್ ಮಾಡುವುದಕ್ಕೆ ಮನಸ್ಸು ಕೂಡ ಒಪ್ಪಿರಲಿಲ್ಲ. ಬದಲಾಗಿ ನಿನ್ನ ಬಗ್ಗೆ ನನ್ನಲ್ಲಿ ಅದೆಂಥದೋ ಹುಚ್ಚು ಪ್ರೀತಿಯ ಸೆಳೆತವಿತ್ತು. ನಿನ್ನ ಕಂಡ ಕ್ಷಣದಿಂದಲೂ ಹೇಳಬೇಕೆಂದುಕೊಂಡಿರುವ ಮಾತುಗಳೆಲ್ಲ ಮೌನವಾಗಿ ಬಿಟ್ಟವು. ನಿನಗಾಗಿ ಧ್ಯಾನಿಸುತಿದ್ದ ವಿಚಾರಗಳೆಲ್ಲ ಕವಿತೆಗಳಾಗಿ ಬಿಟ್ಟವು. ಇನ್ನುಳಿದ ನಮ್ಮಿಬ್ಬರ ಸಂಬಂಧದ ನಡುವೆ ದುರಂತ ಕಥೆಯೊಂದು ಹುಟ್ಟಿಕೊಳ್ಳುವುದಕ್ಕಿಂತ ಮುಂಚೆ ಮನಸ್ಸುಗಳ ತಲ್ಲಣಗಳಿಗೆ ಅಂತ್ಯವನ್ನು ಹಾಡಬೇಕಿತ್ತು. 

ಯಾಕೆಂದರೆ ಬದುಕಿನ ಹತ್ತು ಹಲವು ಜವಾಬ್ದಾರಿಗಳು ಎಲ್ಲರಿಗಿರುವಂತೆ ನನಗೂ ಒತ್ತಡದ ಜೀವನದಲ್ಲಿ ಸಾಕಷ್ಟಿದ್ದವು. ಹಾಗಂತ ನಿನ್ನನ್ನು ನಿರ್ಲಕ್ಷಿಸಬೇಕೆಂಬುದು ಮನಸ್ಸಾಕ್ಷಿಗೆ ಒಪ್ಪಿಗೆಯಾಗಲಿಲ್ಲ. ಅದಕ್ಕಾಗಿಯೇ ನೀನಿಲ್ಲದೇ ಹೋದರೆ ಏನೆಲ್ಲ ಕಳೆದುಕೊಳ್ಳುತಿದ್ದೇನೆ ಎಂಬ ಭಾವನೆ ಮೂಡಿತ್ತು. ನೇರವಾಗಿ ಕೇಳಿಯಾದರೂ ನಿನ್ನ ಅಭಿಪ್ರಾಯವನ್ನು ಕೇಳಿ ತಿಳಿದುಕೊಳ್ಳೋಣ ಎಂದುಕೊಂಡೆ. ಅಷ್ಟೊತ್ತಿಗಾಗಲೇ ನನ್ನೆಡೆ ಇದ್ದಂಥ ಸೆಳೆತವನ್ನು ಜಾರಿಕೊಂಡು ಹೋಗಿರುವುದು ನನಗೆ ಅರಿವಾಗಿರಲಿಲ್ಲ. ತುಂಬಾ ತಡವಾಗಿಯೇ ನಿನ್ನಾ ಮನದ ಭಾವನೆಗಳ ಅಲೆಗಳಲ್ಲಿ ಬಂದು ಒಂದಾಗುವ ಕನಸು ಭಗ್ನಗೊಂಡಿತ್ತು. 

ನನಗಿರುವಷ್ಟು ಧೈರ್ಯ ನಿನಗೆ ಆ ಸಮಯದಲ್ಲಿ ಇದ್ದಿದ್ದರೆ ಏನಾಗುತಿತ್ತೋ ಗೊತ್ತಿರಲಿಲ್ಲ ಗೆಳತಿ. ಆದರೆ ಪ್ರೀತಿಯ ಕೋರಿಕೆಯೊಂದು ತಂದುಕೊಂಡು ಬಂದು, ನಿನ್ನ ಮುಂದೆ ನಿಂತಾಗ ನನಗಾಗಿ ನೀನು ಇಟ್ಟುಕೊಂಡಿರುವ ಗೌರವ ಭಾವನೆ ಕಂಡು ಒಂದು ಕ್ಷಣ ಮೂಕವಿಸ್ಮಿತನಾದೆ. ಈಗ ಹೇಳು. ಹೇಗೆ ಪ್ರೀತಿಸಲಿ ನಿನ್ನ...? ಆರಾಧಿಸುತ್ತೇನೆ. ಅಭಿನಂದಿಸುತ್ತೇನೆ. ಪೂಜಿಸುತ್ತೇನೆ ನಿನ್ನ. ಚಿರಋಣಿಯಾಗಿ ಸದಾ ನಿನ್ನಾ ನೆನಪುಗಳಲ್ಲಿರುತ್ತೇನೆ ಎಂದಷ್ಟೇ ಹೇಳಬಲ್ಲೆ. ನನ್ನೀ ಜೀವನದಲ್ಲಿ ಈಗ ನೀನಿರದಿದ್ದರೇನಂತೆ, ನೀನೆಲ್ಲೇ ಇದ್ದರೂ ಸೌಖ್ಯವಾಗಿರು, ಕ್ಷೇಮವಾಗಿರು ಅಂತಷ್ಟೇ ಆಶಿಸುವೆ. 

(ಹೆಣ್ಣೆಂದರೆ ಬರೀ ಪ್ರೀತಿ-ಪ್ರೇಮಕ್ಕಾಗಿ ಅಲ್ಲ. ಕಾಮತೃಷೆಗಾಗಿಯೂ ಅಲ್ಲ. ಅವಳೊಂದು ಕರುಣಾಮಯಿ, ತ್ಯಾಗದ ಪ್ರತೀಕ ಅವಳು. ಪ್ರೇಮ ದೇವತೆಯಾಗಿ ಕೆಲವರ ದೃಷ್ಟಿಯಲ್ಲಿ ಕಂಡರೆ, ಪೂಜ್ಯನೀಯ ಭಾವನಾಜೀವಿ ಅವಳು. ಅವಳ ಮುಖದ ಕಾಂತಿಯಲ್ಲಿ ಸದಾ ಶಾಂತಿಯನ್ನು ಪ್ರಜ್ವಲಿಸುತ್ತದೆ. ಗೌರವದ ಸಂಕೇತವಾಗಿ ಉಳಿಯುವ ಹೆಣ್ಣನ್ನು ಪ್ರತಿಯೊಬ್ಬರು ರಕ್ಷಿಸಬೇಕಿದೆ. ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ, ಶೋಷಣೆಗೆ ನಲುಗಿ ಹೋಗಿದ್ದಾಳೆ. ದುಷ್ಟ ಜನರ ದುರಾಡಳಿತಕ್ಕೆ ಬಳಕೆ ಮಾಡಿಕೊಳ್ಳುತ್ತಿರುವವರ ಪಾಲಿಗವಳು ಸಿಂಹ ಸ್ವಪ್ನವಾಗಬೇಕಿದೆ. ಹೆಣ್ಣನ್ನು ಶೋಷಿಸದೇ, ಹಿಂಸಿಸದೇ ಸಾಧಿಸುವ ಛಲಕ್ಕಾಗಿ ಅವಳನ್ನು ಬೆನ್ನೆಲುಬಾಗಿ ಇಟ್ಟುಕೊಳ್ಳಬೇಕಾಗಿದೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೊಬ್ಬಳು ಹೆಣ್ಣಿರುತ್ತಾಳೆ ಎಂಬ ಸತ್ಯವನ್ನು ಮರೆಯಬಾರದು.  

ಪ್ರೀತಿ-ಪ್ರೇಮದ ನೆಪದಲ್ಲಿ ಪ್ರಚಲಿತ ದಿನಮಾನಗಳಲ್ಲಿ ಅವಳ ಮೇಲಾಗುತ್ತಿರುವ ಅಪಮಾನ, ಅವಮಾನಗಳಿಗೆಲ್ಲ ಯಾರು ಹೊಣೆ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮಗೆ ಬೇಕಾಗಿರುವ ಪ್ರೀತಿಯನ್ನು ಸಿಗದಿದ್ದರೂ ಚಿಂತೆ ಮಾಡದೇ, ಇನ್ನೊಬ್ಬರ ಜೀವನಕ್ಕೆ ನಮ್ಮಿಂದ ಚಿತೆಯನ್ನಾಗಿಸದೇ ಅವರವರ ಬಾಳನ್ನು ಅವರು ಹಸನಾಗಿಸಿಕೊಳ್ಳಲು ಮತ್ತು ಎಲ್ಲರೂ ನೆಮ್ಮದಿಯಿಂದ ಬದುಕಲು ಮುಂದಾಲೋಚನೆ ಮಾಡಿದರೆ ಎಂಥಾ ಚೆಂದ..!! ಹೀಗೆ ಪ್ರತಿಯೊಬ್ಬರು ಚಿಂತಿಸುವಂತಾಗಬೇಕು ಎಂಬ ಆಸೆ. ಅವಳು ಅವನಿಗೆ ಸಿಗಲಿಲ್ಲ, ಅವನು ಅವಳಿಗೆ ಸಿಗಲಿಲ್ಲ ಎಂಬ ವ್ಯರ್ಥ ಆಲೋಚನೆಗಳನ್ನು ಬಿಟ್ಟು, ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ ಬಾಳಿದರೆ ಜೀವನ ಅದೆಂಥ ಸುಂದರಮಯವಾಗಿರೋದು. 

ಇಂತಹ ವಿಚಾರ ಲಹರಿಯನ್ನು ನಮ್ಮೊಳಗೆ ನಾವು ಹರಿಯಬಿಡುವಂತಾಗಬೇಕು. ಇದರಿಂದ ಒಂದಿಷ್ಟಾದರೂ ನಮಗೆ ನಾವು ಬದಲಾಗಬಹುದಾ ಎಂಬ ಯೋಚನೆ ಬಂದು ಹೋದರೆ ತಪ್ಪೇನಿಲ್ಲ. ಇದರಿಂದ ಆತ್ಮಹತ್ಯೆ (ಸೂಸೈಡ್), ದ್ವೇಷ ಭಾವನೆಯನ್ನು ತ್ಯಜಿಸಿ, ಕೆಟ್ಟ ಆಲೋಚನೆಗಳಿಂದ ದೂರವಿರಲು ಒಂದಿಷ್ಟು ಸಹಕಾರಿಯಾಗಬಹುದು ಎಂಬ ನಂಬಿಕೆ ನನ್ನದು.

ಯಾರಿಗೂ, ಯಾರನ್ನೂ ಈ ವಿಚಾರಗಳನ್ನೆಲ್ಲ ಸೂಚನೆ, ಮಾರ್ಗದರ್ಶನ ಎಂದು ತಿಳಿಯುವುದು ಬೇಡ. ಆದರೆ ಸಮಾಜದಲ್ಲಿನ ಯುವ ಜನಾಂಗ ಒಂದಿಷ್ಟು ಬದಲಾದರೆ ಯಾರೂ ಬೇಡ ಅನ್ನುವುದಿಲ್ಲ. ನಮ್ಮ ಸಮಯ, ಸಾಮಥ್ರ್ಯ, ಪ್ರತಿಭೆಯನ್ನು ಮರ ಸುತ್ತುವುದಕ್ಕೆ, ಭಾವನೆಗಳನ್ನೆಲ್ಲ ಗಾಳಿಯಲ್ಲಿ ತೇಲಿಬಿಟ್ಟು ಅಮೂಲ್ಯವಾದ ಜೀವನ ವ್ಯರ್ಥವಾಗಿ ಕಳೆಯುವುದಕ್ಕಿಂತ ಸಾಧನೆಯ ಶಿಖರವನ್ನೇರಲು ಖರ್ಚು ಮಾಡಿದರೆ ಹೇಗೆ...? ಎಂಬ ಚಿಂತನ-ಮಂಥನ ನಡೆಯುವಂತಾಗಲಿ.

-ವೀರಣ್ಣ ಮಂಠಾಳಕರ್


ಮನಸ್ಸೆಂಬ ಭಾವನೆಗಳಲ್ಲಿ ಗೀಚಿದ ಗೇರೆಗಳು.

ಬುಧವಾರ, ಜನವರಿ 1, 2014

ಬೀದರ ಲೋಕಸಭಾ ಚುನಾವಣಾ ಸ್ಪರ್ಧಿಯಾಗಿ ಎನ್. ಧರ್ಮಸಿಂಗ್


Bottom of Form



Description: http://www.vknews.in/wp-content/uploads/2014/01/05-480x319.jpg
ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ.ನಾರಾಯಣರಾವ ಮಾತನಾಡುತ್ತಿರುವುವುದು

ಬಸಕಲ್ಯಾಣ : ಇದೇ ಬರುವ ಜನವರಿ 26 ರಂದುಕಾಂಗ್ರೆಸ್ಕಾರ್ಯಕರ್ತರ ಸಭೆಕರೆಯಲಾಗಿದ್ದು, ಮುಂಬರುವ ಲೋಕಸಭೆಚುನಾವಣೆಯಲ್ಲಿ ಸ್ಪರ್ಧಿಯಾಗಿಮಾಜಿ ಮುಖ್ಯಮಂತ್ರಿಎನ್. ಧರ್ಮಸಿಂಗ್ ಅವರನ್ನೇಟಿಕೇಟ್ ನೀಡಬೇಕೆಂದು ಹೈಕಮಾಂಡ್ಗೆಒತ್ತಾಯಿಸುತ್ತೇವೆ. ಧರ್ಮಸಿಂಗ್ ಅವರನ್ನಲ್ಲದೇ ಬೇರೆಯವರನ್ನುಟಿಕೇಟ್ ನೀಡುವುದರೆ ಪಕ್ಷದಕಾರ್ಯಕರ್ತನಾಗಿ ನಾನು ಸಹಿಸುವುದಿಲ್ಲ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ. ನಾರಾಯಣರಾವ ನುಡಿದರು.
ಬಸವಕಲ್ಯಾಣ ನಗರದಕಾಂಗ್ರೇಸ್ ಪಕ್ಷದಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕಸಭಾಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪಕ್ಷವನ್ನು ಬಲಪಡಿಸಬೇಕಾದರೆ ಮೊಟ್ಟ ಮೊದಲಿಗೆಬೂತ್ ಮಟ್ಟದಲ್ಲಿಕಾರ್ಯಕರ್ತರ ಸಮಿತಿರಚಿಸಲಾಗುವುದು.ಇದರಿಂದ ಪಕ್ಷಸಂಘಟಿಸಲು ಸಾಧ್ಯವಾಗುತ್ತದೆ. ಹಿಂದಿನ ವಿಧಾನ ಸಭಾಚುನಾವಣೆಯಲ್ಲಿ ನನಗಾದ ಸೋಲು ನನ್ನದಲ್ಲ. ಕಾಂಗ್ರೇಸ್ನಎಲ್ಲಾಕಾರ್ಯಕರ್ತರದ್ದಾಗಿದೆಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕತೆಯಿಂದದುಡಿಯುತ್ತಿರುವ ಫಲವಾಗಿ ವಿಧಾನ ಸಭೆಚುನಾವಣೆಗೆಟಿಕೇಟ್ ಸಿಕ್ಕಿತ್ತು.ಆದರೆ ಪಕ್ಷದಲ್ಲಿರುವಒಗ್ಗಟುತನ ಕೆಲವರಿಂದಒಡೆದು ಹಾಳಾಗಿರುವುದರಿಂದ ನನ್ನ ಕನಸು ಕನಸಾಗಿಯೇ ಉಳಿದಿದೆ. ಮತ್ತೆಉತ್ತಮಕಾರ್ಯಕರ್ತರಿಂದ ಪಕ್ಷ ಬಲಪಡಿಸುವಉದ್ದೇಶ ಹೊಂದಿದ್ದೇನೆಎಂದರು.
ಬರುವಜನವರಿ 19, 2014ಕ್ಕೆ ಆಟೋ ನಗರ ಪಾರ್ಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು.ಅದಕ್ಕಾಗಿ ಈಗಾಗಲೇ 2 ಕೋಟಿರೂಪಾಯಿಅನುದಾನ ಮೀಸಲಿಡಲಾಗಿದೆ. ಹಳೇ ಆಟೋ ನಗರ ನಿರ್ಮಾಣ ಹಾಗೂ ರಿಂಗ್ರಸ್ತೆ ನಿರ್ಮಾಣಕ್ಕೂ . 19ಕ್ಕೆ ಚಾಲನೆ ದೊರೆಯಲಿದೆ. ಆರೋಗ್ಯಘಟಕದಕಾಮಗಾರಿ ಸಹ ಶೀಘ್ರವೆ ಆರಂಭಿಸಲಾಗುವುದುಎಂದು ಭರವಸೆ ನೀಡಿದರು.
ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕತೆಯಿಂದದುಡಿಯುವಯಾರನ್ನೂಕೂಡ ಬಲಿ ಕೊಡುವುದಿಲ್ಲ. ದುಡಿದಿರುವವರಿಗೆತಕ್ಕ ಪ್ರತಿಫಲ ನೀಡುವಉದ್ದೇಶ ನನಗಿದೆ. ನಾನು ಪಕ್ಷಕ್ಕಾಗಿಜೀವಕೊಟ್ಟರೂಕಾರ್ಯಕರ್ತರನ್ನು ಸಾಯಲು ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಾರಿಯ ಲೋಕಸಭಾಚುನಾವಣೆಯಲ್ಲಿಧರ್ಮಅವರುಗೆದ್ದರೆ ನಾನು ಮುಂಬರುವ ವಿಧಾನಸಭಾಚುನಾವಣೆಗೆಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿದ್ದೇನೆಎಂದುಅಭಿಪ್ರಾಯ ಪಟ್ಟರು.
Description: http://www.vknews.in/wp-content/uploads/2013/12/012-480x320.jpg
ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಹಾಗೂ ಉಸ್ತುವಾರಿ ಬಸೀರೋದ್ದೀನ್ ಹಾಲಹಿಪ್ಪರ್ಗಾ ಅವರನ್ನು ಸನ್ಮಾನಿಸಲಾಯಿತು

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ಉಪಾಧ್ಯಕ್ಷಹಾಗೂ ಜಿಲ್ಲಾಉಸ್ತುವಾರಿಬಸಿರೋದ್ದೀನ್ ಹಾಲಹಿಪ್ಪರ್ಗಾ ಮಾತನಾಡಿ, ವಿಧಾನಸಭಾಚುನಾವಣೆಯಲ್ಲಿ ಬಿ.ನಾರಾಯಣರಾವಅವರು ಸೋತಿದ್ದರೂಗೆದ್ದ ಶಾಸಕರಿಂದಆಗದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನಸಾಮಾನ್ಯರ ನಡುವಿದ್ದುಜನರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿಬಸವಕಲ್ಯಾಣತಾಲೂಕಿನಲ್ಲಿರುವ ಬಡಜನರ ಕೆಲಸ ಕಾರ್ಯಗಳನ್ನು ಮಾಡಿಸಿ ಕೊಡುತಿದ್ದಾರೆ. ಜನಪ್ರತಿನಿಧಿ ಆದವರುಜನರಿಗಾಗಿಯೇ ಹೊರತುಜನರಿಂದದೂರವಿರಲು ಶಾಸಕನಾಗಬಾರದುಎಂದು ಕಿವಿ ಮಾತು ಹೇಳಿದರು.
ಪ್ರತಿಯೊಂದು ಪಂಚಾಯತ್ ಮಟ್ಟದಿಂದ ವಾರ್ಡ ಸಭೆಗಳನ್ನು ನಡೆಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ಕಾಟಾಚಾರಕ್ಕೆ ಪಕ್ಷದಲ್ಲಿದುಡಿಯುವವರುದೂರ ಸರಿದು ಸಹಕರಿಸಬೇಕು.ಅಂಥವರಿಂದಉತ್ತಮ ನಡವಳಿಕೆಯ ಕಾರ್ಯಕರ್ತರುಕೂಡಹಾಳಾಗುತ್ತಾರೆ ಎಂದುಖಾರವಾಗಿ ನುಡಿದರು.
ಇದೇ ವೇಳೆ ತಾಲೂಕಾಕಾಂಗ್ರೇಸ್ಅಧ್ಯಕ್ಷ ನೀಲಕಂಠರಾಠೋಡ ಮಾತನಾಡಿ, ಪಕ್ಷದ ಹಿರಿಯಕಾರ್ಯಕರ್ತ ಬಿ.ನಾರಾಯಣರಾವಅವರು ಸೋತಿದ್ದರೂಜನರ ಸಂಪರ್ಕದಲ್ಲಿದ್ದುಕೊಂಡು ಪಕ್ಷ ಬಲಪಡಿಸಲು ಶ್ರಮಿಸುತಿದ್ದಾರೆ. ಜನರ ಸಾರ್ಥಕತೆಗೆ ಹಗಲಿರುಳು ದುಡಿಯುತಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿದುಡಿಯುವವರನ್ನು ಮನ್ನಣೆ ಸ್ಥಾನಮಾನಇದ್ದೇಇರುತ್ತದೆ. ಹಿಂದಿನ ವಿಧಾನಸಭಾಚುನಾವಣೆ ಅಷ್ಟೇನು ಕಳಪೆ ಮಟ್ಟದ್ದಾಗಿಲ್ಲ. ಇದೀಗ ಪ್ರತಿಯೊಬ್ಬಕಾರ್ಯಕರ್ತನು ಮಾನಸಿಕ ಸೀಮಿತದಲ್ಲಿದ್ದು ಕೆಲಸ ಮಾಡಬೇಕಾಗಿದೆಎಂದುಕರೆ ನೀಡಿದರು.
ಬಡವರಿಗಾಗಿಇರುವಯಾವುದೇ ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಬೇಕು.ಜನರಕುಂದು ಕೊರತೆಗಳಿಗೆ ಸ್ಪಂಧಿಸುವದರೊಂದಿಗೆ ಪರಿಹಾರವನ್ನುಒದಗಿಸಲು ಶ್ರಮಿಸುತ್ತೇವೆ. ಪಕ್ಷದಕಾರ್ಯಕರ್ತರುತಮ್ತಮ್ಮ ಊರುಗಳಲ್ಲಿ ಉತ್ತಮಚಾರಿತ್ರ್ಯ ಹೊಂದಿದ್ದಾಗ ಮಾತ್ರಚುನಾವಣೆಯಲ್ಲಿಕಾಂಗ್ರೇಸ್ ಪಕ್ಷಕ್ಕೆಬಹುಮತ ಸಿಗಲು ಸಾಧ್ಯವಾಗುತ್ತದೆಎಂದುರಾಠೋಡ ವಿವರಿಸಿದರು.
ನಗರಘಟಕದಅಧ್ಯಕ್ಷಅಜರ ಅಲಿ ನವರಂಗ ಮಾತನಾಡಿದರು.ಅಶೋಕ ಗುತ್ತೇದಾರ್, ರೈಲ್ವೆ ಸಮಿತಿ ಸದಸ್ಯ ದಿಲೀಪ ಶಿಂಧೆ, ಜಿಲ್ಲಾಕಾಂಗ್ರೆಸ್ಕಾರ್ಮಿಕಘಟಕದಅಧ್ಯಕ್ಷ ಅಶೋಕ ಢಗಳೆ, ತಹಸೀನ್ಅಲಿ ಜಮಾದಾರ್, ಯುವರಾಜ ಭೆಂಡೆ, ಅಜೀಜ್ಅಟ್ಟೂರ್, ರಾಜಕುಮಾರಗುಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭೆಯಲ್ಲಿ ನೂರಾರುಕಾರ್ಯಕರ್ತರು ಹಾಜರಿದ್ದರು.
ವರದಿ: ವೀರಣ್ಣ ಮಂಠಾಳಕರ್, ಬಸವಕಲ್ಯಾಣ, ಬೀದರ ಜಿಲ್ಲೆ.
(Visited 19 times, 13 visits today)
Description: banner
Posted by (ವಿಕೆ ನ್ಯೂಸ್ ಪ್ರತಿನಿಧಿ) on January 1 2014 11:01:36 PM. Filed under ಬೀದರ್, ರಾಜ್ಯ ಸುದ್ದಿಗಳು. You can follow any responses to this entry through the RSS 2.0. You can skip to the end and leave a response. Pinging is currently not allowed.
Leave a Reply
Top of Form